ಕರ್ನಾಟಕ ಮುಸ್ಲಿಂ ಯುನಿಟಿಯು ಕರ್ನಾಟಕ ರಾಜ್ಯ ಸರಕಾರದ ಸಂಘ ಸಂಸ್ಥೆಗಳ ಕಾಯ್ದೆಯಡಿ ಅಧಿಕೃತವಾಗಿ ನೋಂದಣಿಯಾಗಿರುವ ಸಂಸ್ಥೆಯಾಗಿದೆ. ಸಾಮಾನ್ಯವಾಗಿ ಇದನ್ನು KMU ಅಥವಾ ಕೆಎಂಯು ಸಂಘಟನೆ ಎಂದು ಕರೆಯಲಾಗುವುದು. ಕರ್ನಾಟಕ ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಒಂದು ಸಾಮಾಜಿಕ ಸಂಘಟನೆಯಾಗಿ ಸಕ್ರಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ KMU 13 ಜನರ ನೋಂದಾಯಿತ ಸಮಿತಿ, 5 ವಲಯಗಳ 15 ಸಂಚಾಲಕರ ಸಮಿತಿ, ಪ್ರತಿ ಜಿಲ್ಲೆಗಳಿಂದ ಪ್ರತಿನಿದಿಗಳಾಗಿ ರಾಜ್ಯ ಕಾರ್ಯಕಾರಿಣಿ ಮಂಡಳಿಯ 62 ಜನರ ರಾಜ್ಯಸಮಿತಿ, ರಾಜ್ಯ 31 ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಗಳು, ರಾಜ್ಯ ಯುವಘಟಕ, ರಾಜ್ಯ ಮಹಿಳಾಘಟಕ, ವಕೀಲರಘಟಕ, ಗೋವ ನಿವಾಸಿ ಮುಸ್ಲಿಂ ಕನ್ನಡಿಗರ ಘಟಕ, RNI ಘಟಕ ಇಂತಹ ಹಲವಾರು ಸ್ಥರಗಳ ಮೂಲಕ ಸಕ್ರಿಯವಾಗಿ ಸ್ಥಾಪಿತಗೊಂಡಿದೆ. KMU ಈಗಲೇ ಸಾವಿರಾರು ಸದಸ್ಯರನ್ನು ಹೊಂದಿದ್ದು ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ ಕನಿಷ್ಠ 10 ಲಕ್ಷ ಜನರಿಗೆ ಸದಸ್ಯತ್ವ ನೀಡುವ ಗುರಿಯನ್ನು ಹೊಂದಿದೆ.
KMU ಸಂಘಟನೆಯ ಸದಸ್ಯರಾಗಲು ಭಾರತ ದೇಶದ ಪೌರರಾಗಿರುವ (Indian Citizen) 22 ವರ್ಷಗಳು ತುಂಬಿದ ಮುಸ್ಲಿಮರು ಅರ್ಹತೆ ಹೊಂದಿರುತ್ತಾರೆ.
KMU ಸದಸ್ಯತ್ವ(Member Ship)ಬಯಸುವ ವ್ಯಕ್ತಿ ಭಾರತದ ಯಾವುದೇ ನೋಂದಾಯಿತ ರಾಜಕೀಯ ಪಕ್ಷದ ಸದಸ್ಯರಾಗಿದ್ದರು, ಯಾವುದೇ ಮುಸ್ಲಿಮ್ ಝಮಾತಿನ ಸದಸ್ಯರು ಆಗಿದ್ದರು, ಯಾವುದೇ ಮುಸ್ಲಿಮ್ ಪಂಗಡ ಅಥವ ಉಪ ಪಂಗಡಗಳಿಗೆ ಸೇರಿದ್ದರು ಸದಸ್ಯತ್ವ ಪಡೆಯಬಹುದು.
KMU ರಾಜಕೀಯೇತರ, ಧಾರ್ಮಿಕೇತರವಾದ ಸಾಮಾಜಿಕ ಸಂಘಟನೆ ಯಾಗಿದೆ.
KMU ಸಂಘಟನೆಯ ಆರ್ಥಿಕ ಮೂಲ ಮುಸ್ಲಿಮ್ ಸಮಾಜದ ದಿಂದ ದೇಣಿಗೆ ಪಡೆಯುವುದು ಮುಸ್ಲಿಮ್ ಸಮಾಜಕ್ಕಾಗಿ ವಿನಿಯೋಗಿಸುವುದು, ಇದು kmu ಧ್ಯೇಯ. "ಮುಸ್ಲಿಮ್ ಸಮಾಜದಿಂದ ಮುಸ್ಲಿಮ್ ಸಮಾಜಕ್ಕಾಗಿ."
ಕೊನೆಯದಾಗಿ... ನಮ್ಮ ವಿಮೋಚನೆಯ ದಾರಿಯನ್ನು ನಾವೇ ಹಾಕಿಕೊಳ್ಳಬೇಕಿದೆ. ಬನ್ನಿ KMU ಸದಸ್ಯರಾಗೋಣ ಕರ್ನಾಟಕದ ಪ್ರತಿ ಮುಸ್ಲಿಮ್ ಕುಟುಂಬಕ್ಕೆ ನ್ಯಾಯ, ಗೌರವ, ಸಮಾನತೆ, ಸ್ವತಂತ್ರ, ಸಹ ಬಾಳ್ವೆ,ಕಲ್ಯಾಣ, ಅಭಿವೃದ್ಧಿ ನೀಡೋಣ. ಈ ಮೂಲಕ ಕರ್ನಾಟಕ ರಾಜ್ಯ ಪ್ರತಿ ಮುಸ್ಲಿಮ್ ಕುಟುಂಬದಲ್ಲೂ ಅಭಿವೃದ್ಧಿಯ ದೀಪಹಚೋಣ. ನಮ್ಮ ಅಭಿವೃದ್ಧಿ ನಮ್ಮ ಕೈಯಲ್ಲಿ. KMU ಗೆ ಸೇರೋಣ. ಸಮ -ಸಮಾಜದ, ಸಂವಿಧಾನದ ಆಶಯಗಳ ಸಮಗ್ರ ಜಾರಿಯ ಜ್ಯೋತೆಗೆ ಮುಸ್ಲಿಮರ ಸಾಮಾಜಿಕ ನ್ಯಾಯ ಸ್ಥಾಪಿಸೋಣ.
"ನಿಮ್ಮ ಸಮುದಾಯದ ಅಭಿವೃದ್ಧಿಗಾಗಿ ನೀವು ಮುಂದಾಗದಿದ್ದರೆ ಅಲ್ಲ ಹತಾಲ ನು ಸಹ
ನಿಮಗೆ ಸಹಕರಿಸುವುದಿಲ್ಲ " .... ಕುರಾನ್ "
ನಿಮ್ಮ ಪಕ್ಕದ ಮನೆಯವರು
ಹಸಿವಿನಿಂದ ಇದ್ದರೆ, ನೀವು ಊಟ ಮಾಡ ಬೀಡಿ. --...ಕುರಾನ್
"ನೀವು
ಹುಟ್ಟಿದ ನೆಲಕ್ಕೆ ಋಣಿಯಾಗಿರುವುದು ಪ್ರತಿ ಮುಸ್ಲಿಮರ ಹೊಣೆ " --... ಕುರಾನ್
"ಶೋಷಿತರ ದಮನಿತರ ಪರವಾಗಿ ನೀವು ನಿಲ್ಲುವುದು ಖಡ್ಡಾಯ. --...
ಕುರಾನ್.
"ತಂದೆ ತಾಯಿ ಇಲ್ಲದ ಅನಾಥ ಮಕ್ಕಳ ಮುಂದೆ ನಿಮ್ಮ ಮಕ್ಕಳನ್ನು
ಮುದ್ದಿಸಬೇಡಿ " --.. ಕುರಾನ್